ಹಕ್ಕಿಯೊಂದು ಹಾರಿದೆ.

ಕಿಟಕಿಗೊರಗಿ ನಿಂತಿದೆ ದೇಹ,
ಬಿಸಿ ಬಿಸಿ ಟೀ ಇದೆ ಕೈಯಲ್ಲಿ,
ಊಟಿಯ ಟೀ ಘಮಲು ಮೂಗಲ್ಲಿ,
ದೂರದ ಭೀಮೆಯೊಡಲು ಕಣ್ಣಲ್ಲಿ.

ಮೋಡ ಬರೆದ ನಕ್ಷೆ ನಭದಲ್ಲಿ,
ಬೆಳ್ಳಿಕೋಲು ಮೂಡಿವೆ ಬೆಳಗಲ್ಲಿ,
ಮೈ ಮರೆತಿದೆ ತಂಗಾಳಿಯಲ್ಲಿ,
ಕಪ್ಪು ಹಕ್ಕಿಯೊಂದು ಹಾರಿದೆ ದೂರದಲ್ಲಿ.

ದೇಹ ಸಜ್ಜಾಗಿದೆ ಕುತೂಹಲದಲ್ಲಿ,
ಕಣ್ಣು ಸಹಕರಿಸಿದೆ ಕೇಂದ್ರೀಕರಿಸುವಲ್ಲಿ,
ಹುಲ್ಲಿನ ಕಡ್ಡಿಯೊಂದು ಹಕ್ಕಿಯ ಬಾಯಲ್ಲಿ,
ಬಳಸಲು ಮರದ ತುದಿಯ ಗೂಡಲ್ಲಿ.

ಮಿಲನಗೊಂಡ ಗಂಡು ಹಕ್ಕಿಯ ನೆನಪಲ್ಲಿ,
ಮುಂಗಾರಿಗೆ ಹುಟ್ಟುವ ಮರಿಗಳ ಕನಸಲ್ಲಿ,
ಮಳೆ ಗಾಳಿಗೆ ರಕ್ಷಿಸಲೆಂಬ ಕನವರಿಕೆಯಲಿ,
ಹುಲ್ಲು ಹೊತ್ತು ಹಾರಿದೆ ಗೂಡಿನ ಆಸೆಯಲಿ.

tumblr_m6jq11hqH21r3e297o2_1280

ಗಂಡ್ಸು ಅಂದ್ರೆ … ಬೆದೆಗೆ ಬಿದ್ದ ನಾಯಿಯಲ್ಲ ಮತ್ತು……..

ಹಾವನ್ನ ಕಾದಿದ್ದೆರಗಿ ಹಿಡ್ಯೋ ಗಿಡುಗನಲ್ಲ!

ಊರ್ತುಂಬಾ ಹೆಣ್ನಾಯಿ ಗಂಟಾಕ್ಕೊಂಡು
ಗಲ್ಲಿ ಗಟಾರ ಬಿದ್ದೇಳೋ ಬೆದೆಗೆ ಬಿದ್ದ ನಾಯಿಯಲ್ಲ!

ಬಿಸಿ ಬಿಸಿ ನೊರೆಯುಕ್ಕೋ ಹಾಲಿಕ್ಕಿರೋ
ಪಕ್ಕದ್ಮನೆಗೆ ಕದ್ದು ನುಗ್ಗೋ ಕಳ್ಳ ಬೆಕ್ಕಲ್ಲ!

ಮಳೆ,ಚಳಿ, ಬಿಸಿಲಿಗೆ, ಹಸಿವೆಗೆ ಹೊರಬರೋ
ಹಾವನ್ನ ಕಾದಿದ್ದೆರಗಿ ಹಿಡ್ಯೋ ಗಿಡುಗನಲ್ಲ!

ಊರವರೆಲ್ಲಾ ಗಬ್ಬೆಬ್ಬರಿಸಿರೋ ಉಚ್ಚೇ
ಗುಂಡಿಲೊದ್ದಾಡೋಕೇ ಹುಟ್ಟಿರೋ ಹಂದಿಯಲ್ಲ!

ಸುತ್ತಮುತ್ತಲಿನೂರಿನ ಹೆಣ್ಣಸುಗಳಿಗೆ ವೀರ್ಯ
ವಿತರಣೆ ಮಾಡಲು ಬೀಜಕ್ಕೆ ಬಿಟ್ಟ ಹೋರಿಯಲ್ಲ!

ಜನಜಂಗುಳಿಯ ಕಗ್ಗಾಡೊಳಗೆ ಒಂಟಿ ಮೇಯ್ತಿರೋ
ಜಿಂಕೆ,ಕಾಡೆಮ್ಮೆ,ಸಾರಂಗಗಳ ಬಕ್ಷಿಸೋ ಹೆಬ್ಬುಲಿಯಲ್ಲ!

ಯಾರೋ ಸ್ವಾಮಿ, ಪಾದ್ರೀ,ಮುಲ್ಲಾ ಹೇಳಿದ್ದು ಕೇಳೀ
ವಯಸ್ಸಿಗೆ ಮೀರಿದ್ದ ಅದುಮಿಟ್ಟುಕೊಳ್ಳೋಕೆ ಬಂದವನಲ್ಲ!

ಟೆಂಟಲ್ಲಾಕೋ ಮಲೆಯಾಳೀ ಸಿನಿಮಾ ನೋಡಿ
ಕಂಡೋರ್ನೆಲ್ಲಾ ರೇಪ್ ಮಡೋಕೇ ಹುಟ್ಟಿದವನಲ್ಲ!

ಯಾರೋ ನೋಡಿ ಅವರಿವರೊಪ್ಪಿ ತಾಳಿ ಕೊಟ್ಟು
ಕೊನೇಲೀ ಮೂರ್ಗಂಟಾಕ್ಸೋಕೆ ಬಿಟ್ಟಿ ಬಿದ್ದವನಲ್ಲ!

ನೂರಾರು ಜನರ ಮಂತ್ರಾಕ್ಷತೆಗೆ ಗಂಡಹೆಂಡಿರಾಗಿದ್ರೂ
ಮತ್ತೊಬ್ಬಳ ಓಡಿಸಿಕೊಂಡೋಗೋ ದೇಹಗಳ್ಳನಲ್ಲ!

ಮಗ್ಗುಲಲ್ಲಿ ಅವಳೊಟ್ಟಿಗೆ ಮಲಗಿದ್ದರೂ, ಮತ್ತೆದ್ದಾಗ
ತಬ್ಬಲು ಬಯಸೋ ಸೂಳೇರ ಪಾಲಿನ ವಿಠನಲ್ಲ!

ಬಂಧು ಬಳ್ಗ. ಗಂಡ ಮಕ್ಳನ್ನ, ಬಿಡಿಸಿ, ತನ್ನ ತೆವಲಿಗೆ
ಸುಳ್ಳು ಮಂತ್ರದ ಮಂಚಕ್ಕೆಳಕೊಳ್ಳೋ ಠಕ್ಕ ಸನ್ಯಾಸಿಯಲ್ಲ!

ಅವಳ್ಬಿಟ್ಟು ಇವಳ್ಬಿಟ್ಟು, ಇವಳ್ಬಿಟ್ಟು ಅವಳ್ಬಿಟ್ಟು
ಅವಳ್ಯಾರು ಅಂತಾ ಜೂಟಾಟ ಆಡೋ ಓಟಗಾರನಲ್ಲ!

ಅವನುಟ್ಟಿನೊಳಗೂ ಚಟಕ್ಕೋ ಹಟಕ್ಕೋ ಬಿದ್ದ ಅವ್ವ!
ಹಟಕ್ಕೋ ಚಟಕ್ಕೋ ಬಿದ್ದ ಅಪ್ಪಂದಿರು! ಸಮವಾಗಿದ್ದಾರಲ್ಲ?

ಷಡಕ್ಷರಿ.ತರಬೇನಹಳ್ಳಿ.
94496 84491 & 97423 53461.

547513_1393149830919211_1067988210_n

***ಹಕ್ಕಿಯೊಳಗೊಬ್ಬ ಸಂಗಾತಿ****

ಹಾರುವ ಹಕ್ಕಿಗೆ,
ಯಾರ ಹಂಗಿಲ್ಲ.
ಅಪ್ಪಣೆಗಳ ಕಾಯುವುದಿಲ್ಲ,
ಒಪ್ಪಿಗೆಗಳ ನಿರೀಕ್ಷಿಸುವುದಿಲ್ಲ,
ಹಾರಲಿರುವ ದಾರಿಯೊಂದೇ;
ಸಂಗಾತಿ.

ಕಾಲಗಳ ಕೊರಗಿಲ್ಲ.
ಬಿಸಿಲಾದರೇನು,
ಮಳೆಯಾದರೇನು,
ಚಳಿಯಾದರೇನು;
ಎಲ್ಲ ಕಾಲಗಳ ನಡುವೆ,
ತಾ ಹಾರುವುದ,
ಮಾತ್ರ ಬಿಡುವುದಿಲ್ಲ.
ಕ್ಷಣ ಕ್ಷಣಕ್ಕೂ ಸುಖಿಸುವ,
ಕಾಲವೊಂದೇ ಸಂಗಾತಿ

ಜಂಗಮ, ಸ್ಥಾವರಗಳ
ಗೊಂದಲವಿಲ್ಲ.
ಬೆಳಗು ಹಾರಿದ್ದೇ,ಜಂಗಮ.
ರಾತ್ರಿ ತಂಗಿದ್ದೇ, ಸ್ಥಾವರ.
ಹಗಲು ರಾತ್ರಿಗಳ,
ನಡುವೆ ಕೆಲಕಾಲ,
ನೆಲೆನಿಂತ ಗೂಡೊಂದೇ;
ಸಂಗಾತಿ.

ತಾ ಸಂಗ ಮಾಡಿದ,
ಸಂಗಾತಿಗಳ ನೆನಪಿಡಬೇಕಿಲ್ಲ.
ಸಂಗಕ್ಕೆ ಹುಟ್ಟಿದ ಮಕ್ಕಳು ಮರಿಗಳ,
ಲೆಕ್ಕ ಕೊಡಬೇಕಿಲ್ಲ.
ಲೆಕ್ಕ ತಪ್ಪಿದರೂ,
ಚಿತ್ರಗುಪ್ತನ ಮುಂದೆ ಕೈಕಟ್ಟ ಬೇಕಿಲ್ಲ.
ಪ್ರಾಯದ ಚಿತ್ತದಿ ಹುಟ್ಟಿದ,
ಪಾಪದ ಸೋಂಕಿಲ್ಲದ,
ಪ್ರಜ್ನೆಯೇ ಸಂಗಾತಿ.

ಸಂಸಾರ ಸಂಭಂದಗಳ,
ಭಂದನವಿಲ್ಲ.
ಕಾಳು ಕಡ್ಡಿ ಕೂಡಿಡಬೇಕಿಲ್ಲ,
ನೀರು ನಿಡಿ ಹೊಂಚಬೇಕಿಲ್ಲ,
ಹಿಂದೆ ಮುಂದೆ ಹುಟ್ಟಿದವರ,
ಸಂಭಂದ ಹಿಡಿದಿಟ್ಟುಕೊಳ್ಳಬೇಕಿಲ್ಲ.
ಎಲ್ಲ ಬಂಧಮುಕ್ತಿಯ
ವೈರಾಗ್ಯವೇ ಸಂಗಾತಿ.

~ರಿ….
ತರಬೇನಹಳ್ಳಿ ಷಡಕ್ಷರಿ.

ಕೃಪೆ : ಇಂಟರ್ನೆಟ್...